Fact Check: ರಾಹುಲ್‌ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದ ಎಡಿಟ್ ಮಾಡಿದ ಫೋಟೋ ವೈರಲ್

ರಾಹುಲ್‌, ಉದ್ಧವ್

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಲೆಬಾಗಿ ನಮಸ್ಕರಿಸಿದ್ದಾರೆ ಎಂಬಂತೆ ಫೊಟೋ ಒಂದು ವೈರಲ್ ಆಗಿದೆ.  

ಇದರ ಆರ್ಕೆವ್ ಮಾಡಲಾದ ಆವೃತ್ತಿ ಇಲ್ಲಿದೆ. ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆಯನ್ನು ನಡೆಸಿದ್ದು ಇದೊಂದು ಎಡಿಟೆಡ್ ಫೋಟೋ ಎಂಬುದನ್ನು ಕಂಡುಹಿಡಿದಿದೆ.

Also Read: Fact Check: ಮಾಲ್ಡೀವ್ಸ್‌ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎನ್ನುವ ಹೇಳಿಕೆ ನಿಜವೇ?

Fact

ಸತ್ಯಶೋಧನೆಗಾಗಿ ನಾವು “Uddhav Thackeray Rahul Gandhi meeting” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋಟೋ ಲಭ್ಯವಾಗಿದೆ , ಆಗಸ್ಟ್ 7, 2024 ರಂದು ಇಬ್ಬರು ನಾಯಕರು ಭೇಟಿಯಾದಾಗ ತೆಗೆದ ಫೊಟೋ ಇದರಲ್ಲಿದೆ.

Fact Check: ರಾಹುಲ್‌ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದ ಎಡಿಟ್ ಮಾಡಿದ ಫೋಟೋ ವೈರಲ್
ಕಾಂಗ್ರೆಸ್‌ ವೆಬ್‌ಸೈಟ್ ನಲ್ಲಿ ಕಂಡುಬಂದ ಫೊಟೋ

ಠಾಕ್ರೆ ಅವರು ತಮ್ಮ ಪುತ್ರ ಆದಿತ್ಯ ಠಾಕ್ರೆ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು ಎಂದು ನ್ಯೂಸ್‌ಚೆಕರ್ ಗೆ ತಿಳಿದುಬಂದಿದೆ . ಆಗಸ್ಟ್ 20, ಮಂಗಳವಾರ ಮುಂಬೈನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಚಾರವನ್ನು ಪ್ರಾರಂಭಿಸಲು ಸಿದ್ಧವಾಗಿರುವಾಗ ಠಾಕ್ರೆ ಮತ್ತು ಪವಾರ್ ಗಾಂಧಿಯವರೊಂದಿಗೆ ಸೇರುತ್ತಾರೆ ಎಂದು ವರದಿಗಳು ತಿಳಿಸಿವೆ.

ಗಾಂಧಿಯವರ ಮುಂದೆ ಠಾಕ್ರೆಯವರು ತಲೆಬಾಗಿ ನಮಸ್ಕರಿಸುವ ಯಾವುದೇ ಫೋಟೋಗಳು ನಮಗೆ ಕಂಡುಬಂದಿಲ್ಲ, ಆದರೆ ವೈರಲ್ ಚಿತ್ರವನ್ನು (ಬಲ) ಎಐಸಿಸಿ ಫೋಟೋದೊಂದಿಗೆ (ಎಡ) ಹೋಲಿಸಿದಾಗ ಠಾಕ್ರೆ ಅವರ ಉಡುಗೆ ಮತ್ತು ಗಾಂಧಿಯವರ ಹಾವಭಾವವನ್ನು ನಾವು ಪರಿಗಣಿಸಿದಾಗ ಫೋಟೋವನ್ನು ತಿರುಚಲಾಗಿರುವುದು ಕಂಡುಬಂದಿದೆ.  

ನ್ಯೂಸ್‌ಚೆಕರ್ ನಂತರ ವೈರಲ್ ಚಿತ್ರದಿಂದ ಠಾಕ್ರೆಯವರನ್ನು ಪ್ರತ್ಯೇಕಿಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಅನೇಕ ವರದಿಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ದೆಹಲಿ ಮುಖ್ಯಮಂತ್ರಿಯ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಠಾಕ್ರಯೆವರು ಭೇಟಿ ಮಾಡಿದ ಕುರಿತು ಫೋಟೋವನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಠಾಕ್ರೆಯವರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರಾದ ಗೀತಾದೇವಿ ಮತ್ತು ಗೋಬಿಂದ್ ರಾಮ್ ಕೇಜ್ರಿವಾಲ್ ಅವರನ್ನೂ ಭೇಟಿಯಾಗಿರುವುದನ್ನು ಫೋಟೋ ತೋರಿಸುತ್ತದೆ.

ಕೇಜ್ರಿವಾಲ್ ನಿವಾಸಕ್ಕೆ (ಎಡ) ಠಾಕ್ರೆ ಭೇಟಿ ನೀಡಿದ ಫೋಟೋದೊಂದಿಗೆ ವೈರಲ್ ಚಿತ್ರ (ಬಲ) ಹೋಲಿಕೆಯಾಗುವುದನ್ನು ಗುರುತಿಸಿದ್ದೇವೆ. ಇದರಿಂದ ಎರಡು ಸಂಬಂಧವಿಲ್ಲದ ಫೊಟೋಗಳನ್ನು ಸಂಯೋಜಿಸಿ ರಾಹುಲ್‌ ಗಾಂಧಿಯವರಿಗೆ ಠಾಕ್ರೆ ತಲೆಬಾಗಿ ನಮಸ್ಕರಿಸಿದ್ದಾರೆ ಎಂಬಂತೆ ಹೇಳಲಾಗಿದೆ ಎಂದು ತಿಳಿದುಬಂದಿದೆ.

Also Read: ಸ್ವಾತಂತ್ರ್ಯ ದಿನ ಧ್ವಜಾರೋಹಣಕ್ಕೆ ಹಕ್ಕಿ ಸಹಾಯ ಮಾಡಿದೆ ಎಂಬ ವೀಡಿಯೋ ನಿಜವೇ?

Result: Altered Image

Our Sources
Indian National Congress website

Rediff article, Dated: August 09, 2024

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.